SMS MEDITATION
You are
i n v i t e d
SMS MEDITATION
ಬ್ರಹ್ಮಾಂಡವು ಪರೀಕ್ಷಿಸುತ್ತದೆ. ನಾವು ಒಂಟಿಯಾಗುತ್ತೇವೆ. ಏನಾದರೂ ನಿಯೋಜನೆ ಇದ್ದರೆ, ಈ ಸಂದೇಶವನ್ನು ಓದುತ್ತೇವೆ.
ಜ್ಞಾನವನ್ನು ಗಳಿಸುವ ಮೂಲಕ ಮತ್ತು ಗುರುಧರ್ಮದ ಮೂಲಕ ಪ್ರಯಾಣಿಸಿದರೆ ನಾವು ನಮ್ಮ ಜೀವನದ ಉದ್ದೇಶವನ್ನು ಸಾಧಿಸಬಹುದು.
ಎಲ್ಲವನ್ನೂ ಮರೆತು ಅದರಲ್ಲಿ ವಿಲೀನಗೊಂಡು ಆಧ್ಯಾತ್ಮಿಕತೆಯ ಆನಂದವನ್ನು ಅನುಭವಿಸೋಣ,
ಎಲ್ಲಾ ಜೀವಿಗಳನ್ನು ನಿಸ್ವಾರ್ಥವಾಗಿ ಪ್ರೀತಿಸೋಣ.
ಕುಟುಂಬವನ್ನು ಜೊತೆಯಾಗಿರಿಸಿ ಧನ್ಯವಾದ ಹೇಳಿ ಯಾತ್ರೆ ಮುಂದುವರೆಸೋಣ.
ಜೀವನದಲ್ಲಿ ಸವಾಲುಗಳನ್ನು ಎದುರಿಸುವುದು ಹೇಗೆ ?

ಮುಂಬರುವ ಬಿಕ್ಕಟ್ಟುಗಳನ್ನು ಊಹಿಸಿ ಅವುಗಳಿಂದ ಪಾರಾಗಲು ಒಂದು ಮಾರ್ಗವಿದ್ದರೆ?! ನಾವು ಇಂದು ವಾಸಿಸುತ್ತಿರುವ, 3rd Dimonsion ನಿಂದ ನೋಡಲಾಗದ ಅನೇಕ ಬಿಕ್ಕಟ್ಟುಗಳನ್ನು ಸ್ವಲ್ಪ ಹೆಚ್ಚಿನ ದೃಷ್ಟಿಕೋನದಿಂದ, 14th Dimonsion ನಿಂದ ನೋಡಬಹುದು. ದೈಹಿಕ, ಮಾನಸಿಕ, ಆರ್ಥಿಕ ಮತ್ತು ವೈವಾಹಿಕ ರೀತಿಯ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ.



ಆಧ್ಯಾತ್ಮವನ್ನು ಅಭ್ಯಾಸ ಮಾಡಲು ಏನು ಮಾಡಬೇಕು?

"ಸರಿಯಾದ ಮನೋಭಾವ" ಹೊಂದಿರುವ ಯಾರಾದರೂ, ಜಾತಿ, ಧರ್ಮ ಅಥವಾ ವರ್ಗವನ್ನು ಲೆಕ್ಕಿಸದೆ, ಜಗತ್ತಿನ ಎಲ್ಲಿಂದಲಾದರೂ ಗುರುಗಳ ಅನುಮತಿ ಮತ್ತು ಆಶೀರ್ವಾದದೊಂದಿಗೆ ಈ ಮಾರ್ಗವನ್ನು ಅಭ್ಯಾಸ ಮಾಡಬಹುದು. ಬ್ರಹ್ಮಾಂಡದೊಂದಿಗಿನ ನಿಮ್ಮ ಸಂಪರ್ಕವನ್ನು ಪುನಃಸ್ಥಾಪಿಸಲು ಮತ್ತು ಬ್ರಹ್ಮಾಂಡದ ನಿಯಮಗಳ ಪ್ರಕಾರ ನಿಮ್ಮ ಜೀವನವನ್ನು ನಡೆಸಲು ನೀವು ಸಿದ್ಧರಿದ್ದೀರಾ? ಇದನ್ನೆಲ್ಲಾ ಆತ್ಮಜ್ಞಾನಿಯಾದ ಒಬ್ಬ ಗುರುವಿನ ಮೂಲಕ ಅಭ್ಯಾಸ ಮಾಡಬಹುದು.

ಅನುಭವದ ಮೂಲಕ ಮಾತ್ರ ತಿಳಿಯಬೇಕಾದ ಆಧ್ಯಾತ್ಮವನ್ನು ಓದುವ ಮೂಲಕ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಸರಿಯೇ?

ಒಂದು ಜನ್ಮ ಪೂರ್ತಿ ನಾವು ನಮ್ಮೊಳಗಡೆ ಇಣುಕಿ ನೋಡಿದರೂ ಸಹ, ನಾವು ನಮ್ಮನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅಂತಹದರಲ್ಲಿ ನೋಡುವುದರಲ್ಲಿಯೂ, ಕೇಳುವುದರಲ್ಲಿಯೂ ಕಾಣುವುದು ದೂರುಗಳು ಮಾತ್ರ... ಗುರಿ ತಿಳಿಯದೆ ಬದುಕಿ ಎಲ್ಲರಲ್ಲೂ ದೋಷ ಹುಡುಕುವುದಕ್ಕಿಂತ ಜೀವನದ ಉದ್ದೇಶ ಏನೆಂದು ಅರಿತು, ಅದನ್ನೆಲ್ಲಾ ಪೂರ್ಣಗೊಳಿಸಿ, ಸಂತೋಷದಿಂದ ಬದುಕಿ, ಸಮಾಧಿ ಪಡೆಯುವುದು ಎಷ್ಟು ಒಳ್ಳೆಯದು. ಭೌತಿಕ ಮಟ್ಟದಲ್ಲಿ ಇದ್ದುಕೊಂಡು ಆಧ್ಯಾತ್ಮದ ದೃಷ್ಟಿಕೋನವನ್ನು ತಿಳಿಯಲು ನಾವೊಮ್ಮೆ ಪ್ರಯತ್ನಿಸಿ ನೋಡೋಣವೇ.


ಆಧ್ಯಾತ್ಮಿಕತೆ ಆಂತರಿಕವಾಗಿದೆಯೇ ? ಅಥವ ಬಾಹ್ಯವಾಗಿದೆಯೇ?

ಹೊರಗೆ ಹುಡುಕುವುದು ಭಕ್ತಿ. ಆಧ್ಯಾತ್ಮಿಕತೆ ಎಂದರೆ ಭಕ್ತಿಯ ನಿಸ್ವಾರ್ಥ ಮಟ್ಟ. ಪ್ರತಿಯೊಬ್ಬ ವ್ಯಕ್ತಿಯೊಳಗೆ ಆಧ್ಯಾತ್ಮಿಕದ ಪರಿವರ್ತನೆ ಆಗಬೇಕು. ಇತಿಹಾಸ ಮತ್ತು ಆಚರಣೆಗಳು ಭಕ್ತಿಯ ರೂಪಗಳಾಗಿದ್ದರೆ, ದರ್ಶನಗಳು ಆಧ್ಯಾತ್ಮಿಕತೆಯ ರೂಪಗಳಾಗಿವೆ. ಭಕ್ತಿಯಲ್ಲಿ ಸ್ವಾರ್ಥವಿದೆ. ಆಧ್ಯಾತ್ಮದಲ್ಲಿ ನಿಸ್ವಾರ್ಥವಿದೆ. ಎಲ್ಲಾ ದುಃಖಗಳಿಗೆ ಕಾರಣ ಅತಿಆಸೆಗಳಾಗಿವೆ ... ಎಲ್ಲಿ ಆಧ್ಯಾತ್ಮಿಕತೆ ಇರುತ್ತದೆಯೋ ಅಲ್ಲಿ ಸಂತೋಷ ಮತ್ತು ಸುಖ ಇರುತ್ತದೆ.